ಛಂದಸ್ಸು
ಛಂದಸ್ಸು ಎಂಬ ಪದಕ್ಕೆ ಪದ್ಯಪಂಕ್ತಿಯ ರಚನಾರೀತಿಯ ವಿವರಣೆಯೆಂದು ಸಾಮಾನ್ಯ ಅರ್ಥ (ಪ್ರಾಸಡೀ). ಅಲ್ಲದೆ ನುಡಿ ಅಥವಾ ಭಾಷೆಯ ಚಲನಾತ್ಮಕ ರೂಪಕ್ಕೆ ಅನ್ವಯಿಸುವ ಘಟಕಾಂಶಗಳ ಮತ್ತು ರಚನಾವಿನ್ಯಾಸಗಳ ಅಧ್ಯಯನ್ನಕ್ಕೂ ಛಂದಸ್ಸು ಎಂದೇ ಹೇಳುವುದು ವಾಡಿಕೆ. ಇದರಲ್ಲಿ ಎರಡು ವಿಧ; ಭಾಷಾ ಸಂಬಂಧಿ ಮತ್ತು ಸಾಹಿತ್ಯ ಸಂಬಂಧಿ. ಅಂಥ ಅಧ್ಯಯನ ಯಾವುದೋ ಒಂದು ಭಾಷೆಗೊ ಸಾಹಿತ್ಯಕ್ಕೊ ಸೀಮಿತವಾಗದೆ ಎಲ್ಲ ಭಾಷೆ ಎಲ್ಲ ಸಾಹಿತ್ಯದ ಕೇವಲ ತಾತ್ತ್ವಿಕ ಪರಿಶೀಲನೆಯಾಗಬಹುದು; ಅಥವಾ ನಿರ್ದಿಷ್ಟ ಭಾಷಾ ಸಾಹಿತ್ಯದ ಚಾರಿತ್ರಿಕ ವರ್ಣನೆಯಾಗಬಹುದು. ವರ್ಣನೆ ಒಂದಕ್ಕೇ ಮೀಸಲಾಗಿರಬಹುದು ಅಥವಾ ಹಲವನ್ನು ಪರಸ್ಪರ ಹೋಲಿಸಬಹುದು. ಬೆಲೆ ಕಟ್ಟುವ ಕೆಲಸವನ್ನೂ ಛಂದೋ ವಿಮರ್ಶೆ ವಹಿಸಿಕೊಂಡು ವ್ಯಾಕರಣ ಶುದ್ಧಿ, ಭಾಷಣದ ಪರಿಣಾಮ ಪ್ರಾಬಲ್ಯ, ಕಾವ್ಯ ಪ್ರಕಾರದ ಅಂದಚಂದ-ಇವುಗಳ ಮೇಲೆ ಟೀಕೆ ಮಾಡುವುದೂ ಸಾಧ್ಯ. ಪ್ರಾಚೀನ ಗ್ರೀಕರ ಮತ್ತು ರೋಮನರ ಯುಗಗಳಲ್ಲಿ ಪದಗಳೂ ಮತ್ತು ಉಚ್ಚಾರಾಂಶಗಳೂ ಪದ್ಯ ಪಂಕ್ತಿಗೆ ಯುಕ್ತವಾಗಿ ಹೊಂದಿಕೊಂಡಿವೆಯೊ ಇಲ್ಲವೊ ಎಂಬ ಪರೀಕ್ಷೆ ಸಾಂಪ್ರದಾಯಿಕ ವ್ಯಾಕರಣದ ಒಂದು ಭಾಗವಾಗಿತ್ತು. ರೋಮನರ ಕಾಲದಲ್ಲೂ ಮಧ್ಯಯುಗದಲ್ಲೂ ಪದ್ಯಪಂಕ್ತಿಯ ಜೊತೆಗೆ ಗದ್ಯಗತಿಯ ಲಕ್ಷಣವನ್ನೂ ವಿವರಿಸುವುದು ಛಂದಸ್ಸಿನ ಜವಾಬ್ದಾರಿಯಾಯಿತು. ಈಚಿನ ಭಾಷಾಶಾಸ್ತ್ರ ಮುಖ್ಯವಾಗಿ ಶಬ್ದಶಾಸ್ತ್ರವಾದರೂ ಅವಶ್ಯಕವೆಂದು ತೋರಿದಾಗ ಪದ್ಯಗದ್ಯ ರಚನಾವಿಲಾಸವನ್ನೂ ಚರ್ಚಿಸುತ್ತದೆ. ಸ್ಥೂಲವಾಗಿ ಹೇಳುವುದಾದರೆ, ಸಾಹಿತ್ಯಕ ಛಂದೋವಿಮರ್ಶೆಗೆ ಚರ್ಚಿಸುತ್ತದೆ. ಸ್ಥೂಲವಾಗಿ ಹೇಳುವುದಾದರೆ, ಸಾಹಿತ್ಯಕ ಛಂದೋವಿಮರ್ಶೆಗೆ ಉಚ್ಚಾರಾಂಶ ಪದ ಮಾತ್ರೆ ಅವಧಾರಣೆ ಮೊದಲಾದ ವಿಷಯಗಳೇ ಸಾಮಗ್ರಿ; ಪದದ ನಾದರೂಪವನ್ನು ಪರಾಮರ್ಶೆ ಮಾಡಬೇಕಾದಾಗ ಅದು ಸಾಧಾರಣವಾಗಿ ಬಿಡಿ ಧ್ವನಿಯಿಂದ ಆಚೆ ವಿವೇಚಿಸುವುದಿಲ್ಲ. ಧ್ವನಿಮಾ ಎಂಬ ದ್ರವ್ಯದ ಕಡೆಗೆ ಅದು ಸುಳಿಯುವುದಿಲ್ಲ; ಆ ದ್ರವ್ಯ ಭಾಷಾ ಶಾಸ್ತ್ರಕ್ಕೆ ಒಂದು ಪ್ರಧಾನಾಂಶ. ಹಾಗೆಯೇ ಸಾಹಿತ್ಯದ ಒಂದು ಭಾಗವಾದ ಭಾವಗೀತೆ ವಾಚನಕ್ಕೆ ಬರುವುದರಿಂದ ಹಾಡುವುದಕ್ಕೆ ಬರುವ ಸಂಗೀತ ಕೃತಿಯ ಹತ್ತಿರದಲ್ಲಿ ನಿಂತುಕೊಳ್ಳಬಹುದು; ಆದರೆ ಭಾವಗೀತೆಯ ಪಂಕ್ತಿಗಳ ಪ್ರಸ್ತಾರ ಬೇರೆ, ಗಾನಕೀರ್ತನೆಗಳ ವಿನ್ಯಾಸ ಬೇರೆ. ವಾಚನ ಕಾವ್ಯಕ್ಕೆ ಅನುರೂಪ, ಗಾಯನ ಸಂಗೀತಕ್ಕೆ ಅನುರೂಪ.
	ವಾಗೀಂದ್ರಿಯಗಳ ಕರ್ಮದಿಂದ ಉದ್ಭವಿಸಿ ಕರ್ಣೇಂದ್ರಿಯವನ್ನು ತಟ್ಟುವ ಶಬ್ದವೇ ವಾಕ್ಕಿನ ಮೂಲಾಂಶ. ಆ ಶಬ್ದದ ಗುಣಸಂಬಂಧಿ ಮತ್ತು ಕಾಲಸಂಬಂಧಿ ಲಕ್ಷಣಗಳಿಂದ ಶಬ್ದಗತಿ ಅಥವಾ ಲಯ ಉಂಟಾಗುತ್ತದೆಯಾದರೂ ಮೃದೂಚ್ಚಾರ ಮೃದೂಚ್ಚಾರವಿಲ್ಲದಿಕೆ ಆದಿವ್ಯಂಜನಪ್ರಾಸ ಆದಿಸ್ತರಪ್ರಾಸ ಪ್ರಾಸ ಮೊದಲಾದ ಗುಣಗಳ ನೇರ ಪ್ರಭಾವ ಲಯದಮೇಲೆ ಅಷ್ಟೊಂದಿಲ್ಲ. ಧ್ವನಿಯ ತೀವ್ರತೆ (ಇಂಟೆನ್ಸಿಟಿ) ಧ್ವನಿಯ ಅವಧಿ (ಡ್ಯೂರೇಷನ್) ಮತ್ತು ಧ್ವನಿಯ ಶ್ರುತಿ (ಪಿಚ್) ಇವು ಅಳೆತಕ್ಕೆ ಸಿಕ್ಕುವುದರಿಂದ ಯಾವುದೋ ಒಂದು ಬಗೆಯಲ್ಲಿ ಅಳೆದು ನಿಷ್ಕರ್ಷಿಸಬೇಕಾದ ಶಬ್ದಗತಿಗೆ ಮುಖ್ಯವಾಗುತ್ತದೆ. ಅದರಲ್ಲೂ ಬಲು ಮುಖ್ಯವಾದದ್ದು ಧ್ವನಿ ತೆಗೆದುಕೊಳ್ಳುವ ಕಾಲ ಅಥವಾ ಮಾತ್ರೆ. ಇಲ್ಲಿ ಒಂದು ಟಿಪ್ಪಣಿ ಅಗತ್ಯ. ಧ್ವನಿಯ ತೀವ್ರತೆ, ಅವಧಿ, ಶ್ರುತಿ ಯಾವುದೇ ಆಗಲಿ ಅದರ ಅಂತರ್ಗತವೂ ಸಹಜವೂ ಆದ ಸ್ವರೂಪ ಸ್ವಾರಸ್ಯ ಛಂದಸ್ಸಿನ ಗಣನೆಗೆ ಅನಾವಶ್ಯಕ; ಅದು ತನ್ನಂಥ ಮತ್ತು ತನ್ನಿಂದ ಭಿನ್ನವಾದ ಇತರ ಧ್ವನಿಯ ತೀವ್ರತೆ, ಅವಧಿ, ಶ್ರುತಿಗಳೊಂದಿಗೆ ಹೊಂದಿರುವ ಅನ್ಯೋನ್ಯ ಸಂಬಂಧ ಅತ್ಯಾವಶ್ಯಕ; ಶಬ್ದಗತಿ ಬಹು ಸೂಕ್ಷ್ಮವೂ ಸಂಕೀರ್ಣವೂ ಆದ ವಿಷಯ. ಎದ್ದು ಕಾಣುವ ಸ್ಪಷ್ಟ ವಿಚಾರಗಳನ್ನು ಮಾತ್ರ ಇಲ್ಲಿ ಚರ್ಚಿಸಲಾಗುತ್ತದೆ. ಬಿಡಿ ಶಬ್ದ ತನ್ನಷ್ಟಕ್ಕೆ ತಾನೆ ಒಂಟಿಯಾಗಿ ಏನೂ ಕೆಲಸ ಮಾಡಲಾರದು; ಇತರ ಬಿಡಿ ಶಬ್ದಗಳೊಂದಿಗೆ ಕೂಡಿಕೊಂಡು ಉಚ್ಚಾರಾಂಶವೊ ಪದವೊ ಆದಾಗ ಅದಕ್ಕೆ ಧ್ಯೇಯ ಸಾಧನೆ. ಉಚ್ಚಾರಾಂಶಗಳು ಜೊತೆಗೂಡುವಾಗ ಸಬಲವಾದವೂ ದುರ್ಬಲವಾದವೂ ಸರದಿಯಲ್ಲಿ ಬಂದು ಶಬ್ದಗತಿಯಲ್ಲಿ ಏರಿಳಿತ ತೋರಿಬರುತ್ತದೆ; ಅಲ್ಲದೆ ದುರ್ಬಲವಾದವು ಸುಬಲವಾದವುಗಳ ಬಳಿ ಕೂಡಿ ಗುಂಪಾಗಲು ತವಕಿಸುತ್ತವೆ. ಗುಂಪಾಗುವಿಕೆಯೂ ಒಂದು ಮುಖ್ಯ ಸಮಗತಿ. ಏರಿಳಿತ ಗುಂಪುಗಳು ಪುನಃ ಪುನಃ ಒದಗಿ ಶಬ್ದಗತಿಗೆ ಉದ್ದ ಅಥವಾ ಅಳತೆಯ ಪಂಕ್ತಿ ಅಥವಾ ಸಲು ವ್ಯವಸ್ಥಿತವಾಗುವಂತೆ ಮಾಡುತ್ತವೆ. ಉಚ್ಚಾರಾಂಶಕ್ಕೆ ಅಂಟಿರುವ ಭಾರ ಅವಧಿ ಮುಂತಾದವುಗಳನ್ನು ಗೌಣವಾಗಿ ಭಾವಿಸಿ, ಎಷ್ಟು ಉಚ್ಚಾರಾಂಶಗಳಿಂದ ಪಂಕ್ತಿ ಆಗಿದೆ ಎಂಬ ಸಂಖ್ಯಸೂತ್ರ ಒಂದರಿಂದಲೇ ಛಂದೋ ಪ್ರಕಾರವನ್ನು ಗೊತ್ತುಮಾಡುವುದು ಜಪಾನೀ ಫ್ರೆಂಚ್ ಭಾಷೆಗಳಿಗೆ ಒಗ್ಗಿಬಂದಿದೆ. ಆದರೆ ಆ ಪದ್ಧತಿ ಬರಿ ಅಂಕಗಣಿತದ ಲೆಕ್ಕದಂತಲ್ಲ; ಹೆಚ್ಚು ಕಡಿಮೆ ಉಚ್ಚಾರಾಂಶಗಳಿಂದಾದ ಸಾಲುಗಳನ್ನು ಜೋಡಿಸುವದಷ್ಟೇ ಅಲ್ಲ. ತೀವ್ರತೆ ಶ್ರುತಿ ಅವಧಿ ವಿರಾಮಗಳೂ ಹಿಂದಿದ್ದುಕೊಂಡು ಪಂಕ್ತಿಗಳ ರಸವಂತಿಕೆಗೆ ಕಾರಣವಾಗುತ್ತವೆ. ಆದರೂ ಸ್ಥೂಲವಾಗಿ ಆ ಭಾಷೆಗಳ ಛಂದಸ್ಸು ಉಚ್ಚಾರಾಂಶಗಳ ಎಣಿಕೆಯ ಮೇಲೆ ನಿಂತಿದೆ ಎಂದರೆ ತಪ್ಪಲ್ಲ. ಚೀನೀ ಭಾಷೆಯಲ್ಲಿ ಶ್ರುತಿಯೇ ಛಂದಸ್ಸಿಗೆ ಆಧಾರವಾಗುವ ಮೂಲಾಂಶ; ಶ್ರುತಿ ವ್ಯತ್ಯಾಸಗಳಿಂದ ಪದಪುಂಜವೂ ಪಂಕ್ತಿಯೂ ರೂಪುಗೊಳ್ಳುತ್ತವೆ. ಪ್ರಾಚೀನ ಗ್ರೀಕರು ಧ್ವನಿಯ ಅವಧಿಗೆ ಪ್ರಾಧಾನ್ಯ ಕೊಟ್ಟರು. ಪ್ರಾಚೀನ ರೋಮನರಲ್ಲಿ ಅವರದ್ದೇ ಆದ ಛಂದಸ್ಸಿತ್ತು; ಅದರ ಮೂಲಾಂಶ ಅವಧಾರಣೆ (ಆಕ್ಸೆಂಟ್) ಹಾಗಿದ್ದರೂ ಗ್ರೀಕ್ ಮಾದರಿಗಳಿಂದ ವಿಪರೀತ ಮೋಹಿತರಾದ ರೋಮನರಿಗೆ ಧ್ವನಿಯ ಅವಧಿ ಅಥವಾ ಮಾತ್ರೆ ಸಮಂಜಸವೆಂದು ತೋರಿಬಂತು. ಅದನ್ನು ಉಚ್ಚಾರಾಂಶಗಳ ಮೇಲೆ ಬಲವಂತದಿಂದ ಹೇರಿ, ಮೋರಾ ಎಂಬ ಏಕಮಾನವನ್ನು ನಿರ್ಮಿಸಿ, ಲಯ ಗುಚ್ಛಗಳನ್ನು ಏರ್ಪಡಿಸಿಕೊಂಡರು. ಮೋರಾ ಹ್ರಸ್ವಕಾಲಕ್ಕೆ ಸಮಾನ, ಎರಡು ಮೋರಾ ದೀರ್ಘ ಕಾಲಕ್ಕೆ. ಅಂಥ ಹ್ರಸ್ವ ದೀರ್ಘಗಳ ವರಿಸೆಯೇ ಏರಿಳಿತ-ಪುಂಜಗಳಿಗೂ ಪದ್ಯಪಂಕ್ತಿಗೂ ಆಕರ. ಪದ್ಯಪಂಕ್ತಿಯಲ್ಲಿ ಏರಿಳಿತ-ಪುಂಜ ಒಂದೇ ಬಗೆಯದಾಗಿದ್ದರೆ ಆ ಪದ್ಯ ವಾಚನಕ್ಕೂ ಬೇರೆ ಬೇರೆ ಬಗೆಯದಾಗಿದ್ದರೆ ಗಾಯನಕ್ಕೂ ಬಳಸಬೇಕೆಂಬ ವಿಧಿ ಏರ್ಪಟ್ಟಿತು. ಮೊದಲನೆಯದಕ್ಕೆ ಮೆಟ್ರಮ್ ಎಂದೂ ಎರಡನೆಯದಕ್ಕೆ ನ್ಯೂಮರಸ್ ಎಂದೂ ಹೆಸರು. ಮೆಟ್ರಮ್ಮಿನ ಕ್ರಮ ಬದಲಾವಣೆಯನ್ನೇ ಸಹಿಸದ ಬದ್ದವೂ ಬಿಗಿಯೂ ಆದ ಕ್ರಮ; ನ್ಯೂಮರಸ್ಸಿನದು ವೈವಿಧ್ಯವುಳ್ಳ ಸಡಿಲ ಕ್ರಮ. ಬರಬರುತ್ತ ಲ್ಯಾಟಿನ್ ಗ್ರೀಕ್ ಎರಡೂ ಛಂದೋಪದ್ಧತಿಗಳು ಅವಧಾರಣೆಗೂ ಕೊನೆಗೆ ಸ್ವರಭಾರಕ್ಕೂ ಆಸ್ಪದವನ್ನಿತ್ತು ಧ್ವನಿಯ ಅವಧಿಯನ್ನು ಹಿಂದಕ್ಕೆ ಒತ್ತರಿಸಿಬಿಟ್ಟುವು. ಹೊಸಹುಟ್ಟಿನ ಅವಧಿಯಲ್ಲಿ ಹಳೆಯ ಗ್ರೀಕ್ ಲ್ಯಾಟಿನ್ ಮಾತ್ರಾ ಛಂದಸ್ಸನ್ನು ಯೂರೋಪಿನ ಅರ್ವಾಚೀನ ಭಾಷೆಗಳ ಮೇಲೆ ಹೊರಿಸುವ ಪ್ರಯತ್ನ ನಡೆಯಿತು; ಆದರೆ ಅದು ಪೂರ್ತಿ ನಿರರ್ಥಕವಾಯಿತು. ಗ್ರೀಕ್-ಲ್ಯಾಟಿನ್ ಅಥವಾ ಕ್ಲ್ಯಾಸಿಕಲ್ ಛಂದಸ್ಸಿನ ಅವಶೇಷವಾಗಿ ಉಳಿದಿರುವುದು. ಛಂದೋ ವಿಶ್ಲೇಷಣ ಮತ್ತು ಛಂದೋ ಪ್ರಕಾರಗಳ ಅಂಕಿತ ಮಾತ್ರ. ಇಂದು ಆ ಅಂಕಿತಗಳ ಉಪಯೋಗಕ್ಕೂ ಹಲವು ವಿದ್ವಾಂಸರ ವಿರೋಧವಿದೆ.
	ಯೂರೋಪಿನ ಮುಖ್ಯ ಭಾಷೆಗಳನ್ನು ಟ್ಯೂಟಾನಿಕ್ ಅಥವಾ ಜಮ್ರ್ಯಾನಿಕ್ ನುಡಿಗಳು, ರೋಮಾನ್ಸ್ ನುಡಿಗಳು ಎಂದು ವಿಂಗಡಿಸುವುದು ರೂಢಿ. ಇಂಗ್ಲಿಷ್ ಜರ್ಮನ್ ನಾರ್ವೀಜಿಯನ್ ಮೊದಲಾದ ಟ್ಯೂಟಾನಿಕ್ ಭಾಷೆಗಳಿಗೆ ಸ್ವರಭಾರ ಅಥವಾ ಒತ್ತು ಮುಖ್ಯ ಲಕ್ಷಣ. ಪದ್ಯ ಛಂದಸ್ಸಿಗೂ ಗದ್ಯ ಛಂದಸ್ಸಿಗೂ ಭಾರವುಳ್ಳ ಉಚ್ಚಾರಾಂಶ ಭಾರವಿಲ್ಲದ ಉಚ್ಚಾರಾಂಶಗಳ ಯಾವುದೋ ರೀತಿಯ ಪರ್ಯಾಯವೇ ಆಧಾರ. ಅವಧಿ ಶ್ರುತಿ ಮೊದಲಾದ ಅಂಶಗಳ ಪ್ರಭಾವ ಸ್ವಲ್ಪ ಇದ್ದರೂ ಅವು ಗೌಣಾಂಶ. ಇಟಾಲಿಯನ್ ಸ್ಪ್ಯಾನಿಷ್ ಫ್ರೆಂಚ್ ಮುಂತಾದ ರೊಮಾನ್ಸ್ ಭಾಷೆಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಉಚ್ಚಾರಾಂಶಗಳನ್ನಿಟ್ಟು ಅವನ್ನು ಅಧ್ಯಕ್ಷರ ಪ್ರಾಸದಿಂದಲೋ ಸಾಮಾನ್ಯ ಪ್ರಾಸದಿಂದಲೋ ಕೂಡಿಸುವುದರಿಂದ ಲಯ ವಿನ್ಯಾಸ ಉತ್ಪತ್ತಿಯಾಗುತ್ತದೆ. ಅಲ್ಲದೆ ವಿರಾಮದ ಸೂಕ್ತ ಸ್ಥಾನದ ನಿರ್ಣಯವೂ ಶಬ್ದಗತಿಯ ಸೊಬಗನ್ನು ಹೆಚ್ಚಿಸಲು ಸಹಕರಿಸುತ್ತದೆ. ಉಚ್ಚಾರಾಂಶದ ಸಬಲತೆ ದುರ್ಬಲತೆಯೂ ಅದೇ ಕಾರ್ಯದಲ್ಲಿ ನೆರವಾಗುತ್ತದೆ. 
	ಮನುಷ್ಯ ಭಾಷೆಯನ್ನು ನಾಲ್ಕು ಕೆಲಸಗಳಿಗೆ ಬಳಸಿಕೊಳ್ಳುತ್ತಾನೆ. ಆಡುಮಾತಿಗೆ, ವೈಜ್ಞಾನಿಕ ಗದ್ಯಕ್ಕೆ, ಸಾಹಿತ್ಯಿಕ ಗದ್ಯಕ್ಕೆ ಅಥವಾ ಗದ್ಯಕಾವ್ಯಕ್ಕೆ ಮತ್ತು ಪದ್ಯ ಕಾವ್ಯಕ್ಕೆ. ವಿಜ್ಞಾನ ಅಪೇಕ್ಷಿಸುವ ಭಾಷೆಗೆ ಭಾವಾವೇಶ ಅಲಂಕಾರ ವ್ಯಂಗ್ಯಾರ್ಥ ಮುಂತಾದವು ಒಂದು ಇರಕೂಡದು; ಖಚಿತವು ಅಸಂದಿಗ್ಧವೂ ಹೆಚ್ಚು ಕಡಿಮೆ ಇಲ್ಲದ್ದು ಆದ ಅಭಿಪ್ರಾಯದ ಅಭಿವ್ಯಕ್ತಿ ಅದರ ಗುರಿ. ಲಯ ಪ್ರಾಸ ಮೊದಲಾದುವು ಎಲ್ಲೂ ಸುಳಿಯಕೂಡದು. ಆದರೇನು? ಶಬ್ದಧಾರೆಗೆ ಲಯ ಎಷ್ಟರ ಮಟ್ಟಿಗೆ ಸಹಜವಾಗಿ ಬಿಡದೆ ಅಂಟಿಕೊಂಡಿದೆ ಎಂದರೆ, ಹಲವು ವೈಜ್ಞಾನಿಕ ಹೇಳಿಕೆಗಳೂ ಅನಿರೀಕ್ಷಿತವಾಗಿ ಛಂದೋಬದ್ಧವಾಗಿ ಬಿಟ್ಟಿವೆ; ಒಂದೊಂದು ಪದ್ಯಪಂಕ್ತಿಜಾಲವೂ ಆಗಿಬಿಟ್ಟಿದೆ. ಈ ಅಪೂರ್ವ ನಿದರ್ಶನವನ್ನು ನೋಡಿ :
ಂಟಿಜ so ಟಿo ಜಿoಡಿಛಿe, hoತಿeveಡಿ gಡಿeಚಿಣ, ಛಿಚಿಟಿ sಣಡಿeಣಛಿh ಚಿ ಛಿhoಡಿಜ,
hoತಿeveಡಿ ಜಿiಟಿe, iಟಿಣo ಚಿ hoಡಿizoಟಿಣಚಿಟ ಟiಟಿe ಣhಚಿಣ shಚಿಟಟ ಡಿemಚಿiಟಿ 
ಠಿeಡಿಜಿಡಿeಛಿಣಟಥಿ sಣಡಿಚಿighಣ.
ಇದನ್ನು ವೈಜ್ಞಾನಿಕವಾಗಿಯೇ ಎಲ್ಲರೂ ತೆಗೆದುಕೊಳ್ಳುತ್ತಾರೆ; ಸಾಹಿತ್ಯದ ಯೋಚನೆಗೆ ಅವಕಾಶವನ್ನೇ ಕೊಡದೆ ಗ್ರಹಿಸುತ್ತಾರೆ. ಅದರಲ್ಲೊಂದು ಅಚ್ಚರಿ ಮರೆಸಿಕೊಂಡು ಕುಳಿತಿದೆ. ವಾಕ್ಯವನ್ನು ಹೀಗೆ ಬರೆಯೋಣ :
ಂಟಿಜ so ಟಿo ಜಿoಡಿಛಿe, hoತಿeveಡಿ gಡಿeಚಿಣ, 
ಛಿಚಿಟಿ sಣಡಿeಣಛಿh ಚಿ ಛಿhoಡಿಜ,hoತಿeveಡಿ ಜಿiಟಿe,
 iಟಿಣo ಚಿ hoಡಿizoಟಿಣಚಿಟ ಟiಟಿe
ಣhಚಿಣ shಚಿಟಟ ಡಿemಚಿiಟಿ ಠಿeಡಿಜಿಡಿeಛಿಣಟಥಿ sಣಡಿಚಿighಣ.
ಈಗ ಇದು ನಾಲ್ಕು ಪಂಕ್ತಿಯ ಚೌಪದಿಯೆಂದೂ ಅದಕ್ಕೆ ಒಂದು ನಾಲ್ಕು ಮತ್ತು ಎರಡು ಮೂರನೆಯ ಪಂಕ್ತಿಗಳ ಅಂತ್ಯಪ್ರಾಸ ಇರುವುದೂ ಅರಿವಾಗುತ್ತದೆ. ಅಷ್ಟೇ ಅಲ್ಲ ಪ್ರಸ್ತಾರ ಹಾಕಿ ನೋಡೋಣ,
	‰	' 	‰	'	‰	'	‰	'
ಂಟಿಜ so| ಟಿo ಜಿoಡಿಛಿe,| hoತಿev|eಡಿ gಡಿeಚಿಣ, |
	‰	' 	‰	'	‰	'	‰	'
ಛಿಚಿಟಿ sಣಡಿeಣಛಿh |ಚಿ ಛಿhoಡಿಜ, |hoತಿev|eಡಿ ಜಿiಟಿe,
	'
	‰‰	‰	' 	‰	'	‰	'
Iಟಿಣo|ಚಿ hoಡಿ|izoಟಿಣ|ಚಿಟ ಟiಟಿe|
	‰	' 	‰	'	‰	'	‰	'
ಣhಚಿಣ shಚಿಟಟ| ಡಿemಚಿiಟಿ|ಠಿeಡಿಜಿಡಿeಛಿಣ|ಟಥಿsಣಡಿಚಿighಣ.

ಇದು ಸಂಪೂರ್ಣವಾಗಿ ನಿರ್ದಿಷ್ಟವಾದ ಚೌಪದಿ. ಟೆನಿಸನ್ ಕವಿ ತನ್ನ ಮೆಮೋರಿಯಮ್ ಕಾವ್ಯಕ್ಕೆ ಈ ಪದ್ಯ ಪ್ರಕಾರವನ್ನೇ ರೂಢಿಸಿಕೊಂಡ; ಇನ್ ಮೆಮೋರಿಯಮ್ ಚೌಪದಿಯೆಂದೇ ಅದಕ್ಕೆ ಅಂಕಿತ. ಆದರೆ ಛಂದಸ್ಸನ್ನು ಇಲ್ಲಿ ನಾವು ಬಗೆಯುವುದೇ ಇಲ್ಲ; ಅಥವಾ ನಿರಾಕರಿಸುತ್ತೇವೆ. ಆಡುಮಾತಿನ ಸರಣಿಯಲ್ಲೂ ಛಂದೋಬದ್ಧ ತುಣುಕುಗಳೂ ಪ್ರಾಸ ಮುಂತಾದ ಲಕ್ಷಣಗಳೂ ಬಂದೇ ಬರುತ್ತವೆ. ಏತಕ್ಕೆಂದರೆ ಆಡುಮಾತು ಕೇವಲ ವ್ಯಾವಹಾರಿಕವಾದರೂ ಆಲೋಚನೆಯ ಜೊತೆಗೆ ಭಾವವನ್ನು ಅಷ್ಟು ಗರ್ಭಿಕರಿಸಿಕೊಳ್ಳುತ್ತದೆ. ಆಡು ಮಾತಿನ ಲಯದಾಟಿಯನ್ನು ಗದ್ಯವಾಗಲಿ ಪದ್ಯವಾಗಲಿ ಅಲಕ್ಷಿಸುವಂತಿಲ್ಲ; ಅದನ್ನು ಹಿನ್ನಲೆಯಾಗಿ ಇರಿಸಿಕೊಂಡೇ ಪದ್ಯದ ಲಯಧಾಟಿಯನ್ನು ಮುಂದೆ ನಡೆಸಿಕೊಳ್ಳಬೇಕು. ಎರಡು ಧಾಟಿಗಳ ಚೆಂದುಳ್ಳ ಮಿಶ್ರಣವೇ ಕಾವ್ಯದ ವಿಶಿಷ್ಟ ಲಾವಣ್ಯ.
	ಲಯ ಅಥವಾ ಶಬ್ದಗತಿಗೆ ಬೇಕಾದದ್ದು ಭಿನ್ನ ಮೌಲ್ಯದ ಎರಡು ಉಚ್ಛಾರಾಂಶಗಳ ಗುಂಪು ಮತ್ತು ಅವುಗಳ ಪುನರಾವರ್ತನ. ಹ್ರಸ್ವ ದೀರ್ಘ ಉಚ್ಚಾರಾಂಶಗಳೊ ಒತ್ತುಳ್ಳ ಒತ್ತಿಲ್ಲದ ಉಚ್ಚಾರಾಂಶಗಳೊ ಆಗಬಹುದು. ಪದ್ಯದಲ್ಲಿ ಸಾಮಾನ್ಯವಾಗಿ ಎರಡರ ಮತ್ತು ಮೂರರ ಗುಂಪು ಬರುತ್ತವೆ; ನಾಲ್ಕರ ಗುಂಪು ಅಪರೂಪ; ಐದರದ್ದು ಇಲ್ಲವೇ ಇಲ್ಲ. ಗದ್ಯದಲ್ಲಿ ಧಾರಾಳವಾಗಿ ಬರಬಹುದು. ಗುಂಪಿನಲ್ಲಿ ದುರ್ಬಲ ಉಚ್ಚಾರಾಂಶಗಳು ಸಬಲ ಉಚ್ಚಾರಾಂಶವನ್ನು ನೆಮ್ಮಿ ನಿಲ್ಲುತ್ತದೆ. ಗುಂಪಿಗೆ ಒಂದಕ್ಕೂ ಹೆಚ್ಚು ಸಬಲ ಉಚ್ಚಾರಾಂಶವಿದ್ದರೆ ಅವುಗಳಲ್ಲಿ ಒಂದು ಕೇಂದ್ರವಾಗುತ್ತದೆ. ಪದ್ಯ ಛಂದಸ್ಸು ಕ್ಲುಪ್ತ, ಬಿಗಿ, ಪುನರುಕ್ತಿ ಪೂರ್ಣ; ಗದ್ಯ ಛಂದಸ್ಸು ಅನಿಯತ, ಸಡಿಲ; ಅದರಲ್ಲಿಯೂ ಪುನರಾವರ್ತಕ ಬರಲೇಬೇಕು. ಆದರೆ ನಿಯತವಾದ ನಿರೀಕ್ಷಿತ ಸ್ಥಾನದಲ್ಲ. ಗದ್ಯದಲ್ಲಿ ಪದ್ಯಗುಚ್ಚವಾಗಲಿ ಪದ್ಯಪಂಕ್ತಿಯಾಗಲಿ ಬರಕೂಡದು; ಅವು ಬಂದರೆ ಕೇಳುವ ಕಿವಿಗೆ ಅಹಿತ, ಆಶಾಭಂಗ, ಪದ್ಯ ಗದ್ಯ ಎರಡಕ್ಕೂ ಇರುವ ವ್ಯತ್ಯಾಸಗಳಲ್ಲಿ ಒಂದು, ಉದ್ದ ಪದದ ಉಚ್ಚಾರಾಂಶಗಳನ್ನು ಬೇರ್ಪಡಿಸುವ ವಿಚಾರ; ಗದ್ಯದಲ್ಲಿ ಪದವನ್ನು ಪೂರ್ತಿಯಾಗಿಯೇ ಪರಿಗಣಿಸಬೇಕು. ಪದ್ಯದಲ್ಲಿ ಅದನ್ನು ಬೇರೆ ಬೇರೆ ಉಚ್ಚಾರಾಂಶಗಳಾಗಿ ಒಡೆಯಬಹುದು. "ಒಥಿ ಟoಟಿeಟಥಿ ಚಿಟಿguish meಟಣs ಟಿo heಚಿಡಿಣ buಣ miಟಿe " ಇದು ಗದ್ಯವಾದರೆ ಹೀಗೆ ಮೂರೇ ಗುಂಪಾಗುತ್ತದೆ.
‰	'	‰	'	‰	'	‰	'	‰	'
ಒಥಿ ಟoಟಿeಟಥಿ ಚಿಟಿguish|meಟಣs ಟಿo heಚಿಡಿಣ|buಣ miಟಿe
ಪದ್ಯವಾದರೆ ಐದು;
‰	'	‰	'	‰	'	‰	'	‰	'
ಒಥಿ ಟoಟಿe|ಟಥಿ ಚಿಟಿg|uish meಟಣs|ಟಿo heಚಿಡಿಣ|buಣ miಟಿe|
	ಉಸಿರ್ದಾಣ ಮತ್ತು ವಿರಾಮ ಶಬ್ದಗತಿಯ ಒಂದು ಮನನೀಯ ಅಂಗವಾಗ್ದಾರೆ ಅವಿಚ್ಚಿನ್ನವಾಗಿಯೂ ಅಖಂಡವಾಗಿಯೂ ನಡೆಯಲಾರದು; ನಡೆದರೆ ಅದು ಸರಿಯಾದ ತಾತ್ಪರ್ಯವನ್ನು ಈಯಲಾರದು. ಭಾಗ ಭಾಗವಾಗಿ ಪುಂಜ ಪುಂಜವಾಗಿ ವಾಕ್ಯಗಳನ್ನು ವಿಭಜಿಸದೇ ಗತ್ಯಂತರವಿಲ್ಲ. ವಿರಾಮದ ಪಾತ್ರ ಹೀಗೆ ಬಲಿಷ್ಠವಾದದ್ದು. ಎಷ್ಟೋ ಕಡೆ ಹ್ರಸ್ವ ಅಥವಾ ಒತ್ತಿಲ್ಲದ ಉಚ್ಚಾರಾಂಶದ ಬದಲು ವಿರಾಮ ಬರಬಹುದು. ದೊಡ್ಡ ಕಂಬ ಸಣ್ಣ ಕಂಬಗಳನ್ನು ಒಂದಾದ ಮೇಲೊಂದರಂತೆ ನೆಟ್ಟರೆ ಸಾಲು ಲಯಾತ್ಮಕವಾಗುತ್ತದೆ; ಒಂದೇ ಎತ್ತರದ ಕಂಬಗಳನ್ನು ಸಾಲಾಗಿಸಿದರೆ ಹೀಗೆ? ಅದೂ ಲಯಾತ್ಮಕ, ಏತಕ್ಕೆಂದರೆ ಕಂಬ-ಕಂಬವಿಲ್ಲದಿಕೆ ಅಥವಾ ಭರ್ತಿ ಬಿಡುವು ಎಂಬ ಎರಡು ಅಂಶ ಸಾಕು ಲಯದ ಪರಿಣಾಮ ಉಂಟು ಮಾಡುವುದಕ್ಕೆ. ಲಯ ಪ್ರಪಂಚವನ್ನು ತುಂಬಿಕೊಂಡಿದೆ; ಮನುಜನ ಬಾಳಿಗೆ ಅದರಿಂದಲೇ ಸ್ವಾರಸ್ಯ, ಸಂತೃಪ್ತ.
(ಎಸ್.ವಿ.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ